ಕನ್ನಡಕ್ಕೆ ಕಾಲಿಟ್ಟ ರಾಹುಲ್ ಬೋಸ್ `ನಿರುತ್ತರ`ದಲ್ಲಿ ಬಾಲಿವುಡ್ ನಟ
Posted date: 11 Thu, Sep 2014 – 09:03:04 AM

ಕಲಾವಿದನಿಗೆ ಭಾಷೆಯ ಹಂಗಿರಬಾರದು. ಉತ್ತಮಕಥೆ, ಚಿತ್ರಕಥೆ, ಉತ್ತಮ ನಿರ್ದೇಶಕ ಇದ್ದರೆ ಭಾಷೆಯಾವುದಾದರೇನು? ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ ಎನ್ನುತ್ತ ಬಾಲಿವುಡ್ ನಟರಾಹುಲ್ ಬೋಸ್ ಮಾತಿಗೆ ಇಳಿದರು.
ವಿಶ್ವರೂಪಂನ ಖಳನಾಯಕ ನಿಂದ ಹಿಡಿದು, ಜಪಾನಿ ವೈಫ್, ಐ ಯಾಮ್, ತಕ್ಷಕ್‌ನಂಥ ಚಿತ್ರಗಳಿಂದ ಗಮನ ಸೆಳೆದಿರುವ ರಾಹುಲ್ ಬೋಸ್ ಮೊದಲ ಬಾರಿಗೆ ಕನ್ನಡ ಚಿತ್ರವೊಂದರನ್ನು ಪಾತ್ರ ನಿರ್ವಹಿಸುತ್ತಿದ್ದಾರೆ. ಅದು, ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ. ಭಾಗಿರಥಿ ಖ್ಯಾತಿಯ ಭಾವನಾ ಈ ಚಿತ್ರದಲ್ಲಿ ರಾಹುಲ್ ಬೋಸ್‌ ಅವರ ಪತ್ನಿ.
ಸಂಕೀರ್ಣ ಮಾನವ ಸಂಬಂಧಗಳ ಕುರಿತಾದ ಈ ಚಿತ್ರದ ಕಥೆ ನನಗೆ ಹೊಸದೆನ್ನಿಸಿತು. ಕಥೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಯಾರೂಕೆಟ್ಟವರಲ್ಲ. ಆದರೆ ಸಂದರ್ಭ, ಇಗೋ ಸಮಸ್ಯೆ, ಮಹತ್ವಾಕಾಂಕ್ಷೆ ವ್ಯಕ್ತಿಯನ್ನು ಬದಲಾಯಿಸುತ್ತದೆ. ನಾನು ಈ ಚಿತ್ರದಲ್ಲಿ ಐಟಿ ಕಂಪೆನಿಯ ಹಿರಿಯ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದ ರಾಹುಲ್ ಬೋಸ್ ಚಿತ್ರದಕುರಿತು ಇನ್ನಷ್ಟು ಮಾಹಿತಿ ನೀಡಲು ನಿರಾಕರಿಸಿದರು. ಪಕ್ಕದಲ್ಲೇ ಕುಳಿತಿದ್ದ ನಿರ್ದೇಶಕ ಅಪೂರ್ವ ಕಾಸರವಳ್ಳಿ ಸಹ ವಿವರಕ್ಕೆ ಇನ್ನಷ್ಟು ಕಾಲಾವಕಾಶ ಕೊಡಿ ಎಂದು ಮಾಧ್ಯಮದವರನ್ನು ಕೋರಿದರು.
ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೆ ಹಿಂದೇಟೇನೂ ಹಾಕುವುದಿಲ್ಲ. ಹಾಗೆ ನೋಡಿದರೆ ನನ್ನ ಹೆಚ್ಚಿನ ಚಿತ್ರಗಳು ಬಂದಿದ್ದು ಪ್ರಾದೇಶಿಕ ಭಾಷೆಗಳಲ್ಲಿಯೇ. ಈಗಷ್ಟೇ ಬೆಂಗಾಲಿ ಚಿತ್ರವೊಂದರಲ್ಲಿ ಪತ್ತೇದಾರನ ಪಾತ್ರ ನಿರ್ವಹಿಸಿದ್ದೇನೆ. ಕನ್ನಡದಲ್ಲಿಯೂ ಉತ್ತಮ ಪಾತ್ರದ ಅವಕಾಶ ಸಿಕ್ಕರೆ ಇಲ್ಲ ಎನ್ನುವುದಿಲ್ಲ ಎಂದು ಬೋಸ್ ಸ್ಪಷ್ಟಪಡಿಸಿದರು.
ಗಿರೀಶ್ ಕಾಸರವಳ್ಳಿಯವರ ಹಲವು ಚಿತ್ರಗಳನ್ನು ನಾನು ನೋಡಿದ್ದು ಫ್ರಾನ್ಸ್ ಮತ್ತು ಜರ್ಮನಿಯಲ್ಲೇ. ಗಿರೀಶ್ ಕಾಸರವಳ್ಳಿ ಭಾರತದ ಚಿತ್ರರಂಗದಲ್ಲಿಯೇ ದೊಡ್ಡ ಹೆಸರು. ಅವರ ಮಗನ ನಿರ್ದೇಶನದ ಚಿತ್ರವೆಂಬ ಕಾರಣಕ್ಕೆ ಚಿತ್ರಕಥೆ ಕಳಿಸುವಂತೆ ಹೇಳಿದೆ. ಸ್ವಲ್ಪ ಆಸಕ್ತಿ ಹೆಚ್ಚೇ ಇತ್ತು ಎಂದು ಅವರು ಒಪ್ಪಿಕೊಂಡರು.
ಭಾರತದ ಪ್ರಾದೇಶಿಕ ಚಿತ್ರಗಳ ಕುರಿತೇ ಅವರ ಮಾತುಕತೆ ಸಾಗಿತ್ತು. ಭಾರತದ ಉತ್ತಮ ಭಾಷಾ ಚಿತ್ರಗಳನ್ನು ನೋಡಬೇಕಾದರೆ ನಾವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೇ ಹೋಗಬೇಕು. ಚಿತ್ರೋದ್ಯಮದ ಎಕನಾಮಿಕ್ಸ್ ಇದ ಕ್ಕೆಕಾರಣ. ೫೦ ಲಕ್ಷರೂಪಾಯಿ ವೆಚ್ಚದಲ್ಲಿಚಿತ್ರ ನಿರ್ಮಿಸಿದರೆ ಅದರ ಬಿಡುಗಡೆಗೆ ೧ ಕೋಟಿರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ನೀವು ಹಣಕ್ಕಾಗಿ ಚಿತ್ರ ನಿರ್ಮಿಸುತ್ತಿದ್ದೀರಾ ಅಥವಾ ಖುಷಿಗಾಗಿ ಚಿತ್ರ ಮಾಡಿದ್ದೀರಾ ಎನ್ನುವುದ ಚಿತ್ರದ ಬಿಡುಗಡೆಯಲ್ಲಿ ಪ್ರಮುಖ ಅಂಶವಾಗುತ್ತದೆ. ನಟನೂ ಹಣಕ್ಕಾಗಿ ಚಿತ್ರ ಒಪ್ಪಿಕೊಂಡಿದ್ದಾನೆಯೇ ಅಥವಾ ತನ್ನ ತೃಪ್ತಿಗಾಗಿ ಅದನ್ನು ನಿರ್ವಹಿಸಿದ್ದಾನೆಯೇ ಎನ್ನುವುದು ಆ ನಟನ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ನಾನು ಈ ಎರಡರ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಬೋಸ್ ಹೇಳಿದರು.
ರಾಹುಲ್ ಬೋಸ್ ಅವರ ಪ್ರಕಾರ ಇಂಟರ್ ನೆಟ್ ಭಾರತದ ಪ್ರಾದೇಶಿಕ ಭಾಷೆ ಚಿತ್ರಗಳಿಗೆ ಮುಂದೆದೊಡ್ಡ ಬ್ರೇಕ್ ನೀಡಲಿದೆ. ತಂತ್ರಜ್ಞಾನದಿಂದಾಗಿ ವಿಶ್ವದಯಾವುದೇ ಮೂಲೆಯಲ್ಲಿರುವ ವ್ಯಕ್ತಿತನಗೆ ಬೇಕಾದಚಿತ್ರವನ್ನು ನೋಡಬಹುದು. ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಲು ಶಕ್ತರಾಗದ ನಿರ್ಮಾಪಕ, ನಿರ್ದೇಶಕನೂ ಇಂಟರ್‌ನೆಟ್‌ನಲ್ಲಿ ಚಿತ ತೇಲಿಬಿಟ್ಟು ಆಸಕ್ತ ವೀಕ್ಷಕರಿಂದ ಸ್ವಲ್ಪ ಹಣ ಮಾಡಬಹುದು ಎಂದು ಅವರು ವಿಶ್ಲೇಷಿಸಿದರು.
ತಾವು ನಟಿಸಿದ ಚಿತ್ರಗಳಿಗೆ ತಾವೇಡಬ್ ಮಾಡಿದ್ದಾಗಿ ರಾಹುಲ್ ಬೋಸ್ ಹೇಳಿದರು. ಆದರೆ ಬೆಂಗಾಲಿ ಚಿತ್ರವೊಂದರಲ್ಲಿ ಇದು ಸಾಧ್ಯವಾಗಿಲ್ಲ ಎಂಬ ದುಃಖವೂ ಅವರಿಗಿತ್ತು. ವಿಶ್ವರೂಪಂನಲ್ಲಿ ತಾವೇ ತಮಿಳು ಡಬ್ ಮಾಡಿದ್ದಾಗಿ ಹೇಳಿದರು. ತಮಿಳಿಗಿಂತ ಕನ್ನಡ ಸುಲಭ. ಹಾಗಾಗಿ ನಿರುತ್ತರದಲ್ಲಿ ತಾವೇ ಡಬ್ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಪಕ್ಕದಲ್ಲೇ ಇದ್ದ ನಟಿ ಭಾವನಾ ರಾಹುಲ್ ಬಹಳ ಬೇಗ ಕನ್ನಡ ಕಲಿಯುತ್ತಿದ್ದಾರೆ ಎಂಬ ಸರ್ಟಿಫಿಕೇಟ್ ನೀಡಿದರು.
ತಮ್ಮ ಬೆಂಗಳೂರು ಪ್ರೀತಿಯನ್ನೂ ರಾಹುಲ್ ಬೋಸ್ ಹಂಚಿ ಕೊಂಡರು. ಇಲ್ಲಿನ ಕ್ರಿಕೆಟ್, ಸಂಗೀತ ಸಂಸ್ಕೃತಿ, ರಂಗಭೂಮಿ, ಶಿಕ್ಷಣ ಆಸಕ್ತಿಯನ್ನು ಹೊಗಳಿದರು.ತಾವು ಹುಟ್ಟಿದ್ದು ಬೆಂಗಳೂರಿನಲ್ಲಲ್ಲ, ಕೋಲ್ಕತ್ತದಲಿ ಎಂದು ವಿಕಿಪೀಡಿಯಾಕ್ಕೆ ತಿದ್ದುಪಡಿಯನ್ನೂ ಪ್ರಕಟಿಸಿದರು.
ಹೋಮ್‌ಟೌನ್ ಪ್ರೊಡಕ್ಷನ್ಸ್ನ ಚೊಚ್ಚಲ ಚಿತ್ರ, ನಿರುತ್ತರದ ಮೊದಲ ಹಂತದಚಿತ್ರೀಕರಣ ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದು ಅಂತಿಮಘಟ್ಟದಲ್ಲಿದೆ. ಎರಡನೇ ಹಂತದ ಚಿತ್ರೀಕರಣ ರಾಜಸ್ತಾನ, ಹಿಮಾಚಲ ಪ್ರದೇಶ ಇನ್ನಿತರ ಕಡೆಗಳಲ್ಲಿ ನಡೆಯಲಿದೆ. ರಾಹುಲ್ ಬೋಸ್, ಭಾವನಾ ಅವರಲ್ಲ ದೇಕಿರಣ್ ಮತ್ತು ಐಂದ್ರಿತಾರೇ ತಾರಾಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed